ಸ್ರಗ್ಧರಾ ವೃತ್ತದ ಪ್ರತಿಪಾದದಲ್ಲಿಯೂ ೨೧ ಅಕ್ಷರಗಳಿವೆ. ಇದರ ಗಣವಿನ್ಯಾಸದಲ್ಲಿ ಬರುವ ಗಣಗಳು "ಮರಭನಯಯಯ" ಇದರ ಸೂತ್ರಪದ್ಯ ಹೀಗಿದೆ "ತೋರಲ್ ಮಂ ರಂಭನಂ ಮೂಯಗಣಮುಮದೆತಾಂ ಸ್ರಗ್ಧರಾ ವೃತ್ತಮಕ್ಕುಂ" ಉದಾಹರಣೆ ಆ ರುದ್ರಾಕ್ಷ್ಯಗ್ನಿ ಸಂತಪ್ತನನೆನೆ ಜನರಾ ತಾಪಮಂ ಪೆರ್ಚಿಸುತ್ತುಂ ವಾರಸ್ತ್ರೀರಕ್ತವರ್ಣಾಧರದೊಳುರೆ ನಿಲಲ್ ಜಾರುತುಂ ಪೋದನಂ ಕಾ- ಮಾರಿಪ್ರಾಸಪ್ರತೀಕ್ಷಾನಿರತನತಿಭಯಭ್ರಾಂತನಂ ಪೋಲ್ವವೋಲೇ ಸೇರುತ್ತುಂ ನೀರನಾಗಳ್ ನಿರುಕಿಪರಿಗೆ ತಾಂ ಕಂಡನಾ ನೀರಜಾಪ್ತಂ|| (ಸೂರ್ಯಾಸ್ತ ವರ್ಣನೆಯ ಮುಕ್ತಕ) ಸಂಸ್ಕೃತಕನ್ನಡಗಳೆರಡರಲ್ಲಿಯೂ ಈ ಛಂದಸ್ಸಿನ ಪದ್ಯಗಳು ವಿಪುಲವಾಗಿ ಸಿಗುತ್ತವೆ.